ಕ್ವಿನೋಲಿನ್
ಬೆಂಜೀóನ್ ಮತ್ತು ಪಿರಿಡಿನ್ ವೃತ್ತಗಳೆರಡೂ (ರಿಂಗ್ಸ್) ಒಂದು ನಿರ್ದಿಷ್ಟ ರೀತಿಯಲ್ಲಿ ಸೇರಿ ಆದ ದ್ವಿವೃತ್ತ ಸಂಯುಕ್ತ. ಇದನ್ನು 2, 3-ಬೆಂeóÉೂೀಪಿರಿಡಿನ್ ಎಂದು ಕೂಡ ಕರೆಯಬಹುದು. ಮೊದಲ ಬಾರಿಗೆ ಈ ಸಂಯುಕ್ತವನ್ನು ಕಲ್ಲಿದ್ದಲ ತಾರೆಣ್ಣೆಯಿಂದ 1834ರಲ್ಲಿ ಬೇರ್ಪಡಿಸಲಾಯಿತು. ಇಂದಿಗೂ ಅದೇ ಇದರ ಮುಖ್ಯ ಆಕರ. ಕ್ವಿನೈನ್ ಗುಂಪಿಗೆ ಸೇರಿದ ಅಲ್ಕಲಾಯ್ಡುಗಳಲ್ಲಿ ಈ ಸಂಯುಕ್ತದ ಅಂಶವಿರುತ್ತದೆ. 

ಚಿತ್ರ-1

ಕ್ವಿನೋಲಿನ್ ಮತ್ತು ಆದೇಶಿತ (ಸಬ್ಸ್‍ಟಿಟ್ಯೂಟೆಡ್) ಕ್ವಿನೋಲಿನುಗಳನ್ನು ತಯಾರಿಸಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಗ್ಲಿಸರಿನ್, ಅಕ್ರೋಲಿನ್ ಮತ್ತು ಫಿನೈಲ್ ಹೈಡ್ರಜಿನ್ನುಗಳನ್ನು ಉಪಯೋಗಿಸುವ ಸ್ಕ್ರಾಪ್‍ನ ವಿಧಾನ ಮುಖ್ಯವಾದುದು. ಕ್ವಿನೋಲಿನ್ ಸಂಯುಕ್ತದಿಂದ ಹೆಚ್ಚಿನ ಉಪಯೋಗಗಳೇನೂ ಇಲ್ಲವಾದರೂ ಈ ಗುಂಪಿನ ಇತರ ಅನೇಕ ಸಂಯುಕ್ತಗಳನ್ನು ಔಷಧಿಗಳ ಉದ್ದಿಮೆಯಲ್ಲಿ ಬಹುವಾಗಿ ಉಪಯೋಗಿಸಲಾಗುತ್ತಿದೆ. ಇಂಥವುಗಳ ಪೈಕಿ 8-ಹೈಡ್ರಕ್ಸಿಕ್ವಿನೋಲಿನ್ ಮತ್ತು ಅದರ ವ್ಯುತ್ಪನ್ನಗಳು ಮುಖ್ಯವಾದವು.									(ಕೆ.ಟಿ.ಎಸ್.)